Saturday, November 20, 2010

"ಬೆಲೆ ಇಲ್ಲದ ಭಾಷೆಗಳು "

"ಬೆಲೆ ಇಲ್ಲದ ಭಾಷೆಗಳು " ಭಾಷೆಗೆ  ಬೆಲೆ ಎಲ್ಲಿ..?


ಪುರಾತನ  ಕಾಲದಲ್ಲಿ ಅಂದರೆ ತೆಥ್ರಾಯುಗ, ದ್ವಾಪರಯುಗ ಕಾಲಗಳಲ್ಲಿ ಭಾಷೆಗೆ ಅದರದೇ ಆದ ಪ್ರಾಮುಕ್ಯತೆ ಇತ್ತು.ಕೊಟ್ಟ ಭಾಷೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದ ಕಾಲವದು,  ತೆಥ್ರಾಯುಗ ಕಾಲದಲ್ಲಿ ಶ್ರೀ ರಾಮದೇವರ ತಂದೆ ದಶರಥ  ಮಹಾರಾಜ ರು ಕೈಕೆಗೆ ಕೊಟ್ಟ ಭಾಷೆಯಂತೆ ಶ್ರೀ ರಾಮನು ಕಾಡಿಗೆ ಹೋಗ ಬೇಕಾಯಿತು, ಹಾಗು ದ್ವಾಪರಯುಗ ಕಾಲದಲ್ಲಿ ಭೀಮನು ಕೇವಲ ಸಾಮಂತ ರಾಜನಿಗೆ ಕೊಟ್ಟ ಭಾಷೆಯಂತೆ ಒಂದು  ಕುದುರೆಯ ಸಲುವಾಗಿ ಭೀಮ ನು ತನ್ನ ಗುರುವಾದ ಕೃಷ್ಣ  ಬಲರಾಮ ರ  ಜೊತೆ ಯುದ್ದ ಮಾಡಬೇಕಾಯಿತು  ಆದರೆ ಈ ಕಲಿಯುಗದಲ್ಲಿ ಭಾಷೆಗೆ ಬೆಲೆನೇ ಇಲ್ಲದಂತಾಗಿದೆ, ಕೊಟ್ಟ ಭಾಷೆಗೆ ನಡೆದುಕೊಳ್ಳುವವರು ತುಂಬಾ ವಿರಳ, ಇದ್ದರು ಅಂತ ವ್ಯಕ್ತಿಗಳು  ಅಪರೂಪದ ವ್ಯಕ್ತಿಗಳು,  ಪ್ರೀತಿ ಮಾಡಿದ  ಹುಡುಗಿ ತನ್ನ ಪ್ರಿಯ ಹುಡುಗನ ಹತ್ತಿರ ಭಾಷೆ ತೆಗೆದುಕೊಳ್ಳುವುದು ಸಾಮಾನ್ಯ ಅದರಂತೆಯೇ ಹುಡುಗನಿಗೂ ಸಹ ಅವಳು ಭಾಷೆಯನ್ನು ಇಟ್ಟಿರುತ್ತಾಳೆ. ಆದರೆ ಆ ಹುಡುಗಿ ಕೊಟ್ಟ ಭಾಷೆಗೆ ಬೆಲೆನೇ ಇಲ್ಲ ಅದು ತಿಳಿಯುವುದು ಅವಳು ಅವನನ್ನ ಬಿಟ್ಟು ದೂರವಾದ  ಬಳಿಕ ಮಾತ್ರ ..


ಯಾವುದೊ ಯಾವುದೊ ಹೆಸರಿನಲ್ಲಿ ಆ ಸಮಯಕ್ಕೆ ತಕ್ಕಂತೆ  ಭಾಷೆಯನ್ನ ಸ್ವಲ್ಪವು ಯೋಚಿಸದೆ ನೀಡುತ್ತಾರೆ ಆದರೆ ಆ ಭಾಷೆಯ ಬೆಲೆ ಅವರಿಗೆ ತಿಳಿಯುವುದೇ ಇಲ್ಲ, ಭಾಷೆಗೆ ಅದರದೇ ಆದ ನಂಬಿಕೆ ಇದೆ, ಸ್ಥಾನ  ಮಾನವಿದೆ ಹಿರಿಯರು ಹಿಂದೆ ಭಾಷೆಗೆ ತುಂಬಾ ಪ್ರಾಮುಕ್ಯತೆಯನ್ನು ಕೊಡುತ್ತಿದ್ದರು. ಕೊಟ್ಟ ಮಾತಿಗೆ ಎಂದು ತಪ್ಪುತ್ತಿರಲಿಲ್ಲ, ಆದರೆ ಈಗ ಕಾಲ ಬದಲಾಗಿದೆ ಆಡಿದ ಮಾತುಗಳು ಮಾತಾಗಿ ಉಳಿಯುವುದಿಲ್ಲ, ಆಡಿದ ಮಾತೇ ಒಂದು ಮಾಡುವುದೇ ಒಂದು.. ಕಾಲ ಬದಲಾದಂತೆ ಮನುಷ್ಯರು  ಬದಲಾಗುತ್ತಾರೆ,  ಏನೇ ಆದರು ಸತ್ಯ ಎಂಬುದು ಮಾತ್ರ ಎಂದು ಸುಳ್ಳು ಆಗುವುದಿಲ್ಲ. 

ಪ್ರತಿಯೊಬ್ಬ ಮನುಷ್ಯನಲ್ಲಿ ದೇವ ಕೃಪೆ ಅನ್ನೋದು ಇರುತ್ತೆ ಹಾಗೆಯೇ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಪ್ರೇಮ ವಾತ್ಸಲ್ಯ ಮಮತೆ ನಂಬಿಕೆ ತುಂಬಾ ಮುಖ್ಯ.  ಏನೇ ತಪ್ಪಾದರೂ ಅದನ್ನು ನನ್ನದು ತಪ್ಪಿಲ್ಲ ಅಂತ ಸಾಭೀತು ಮಾಡಬಹುದು ಆದರೆ ದೇವರು ಅಂತ ಒಬ್ಬ ಮೇಲೆ ಎಲ್ಲಾ ಆಟ ನೋಡ್ತಾ ಇರ್ತಾನೆ ಅನ್ನೋದನ್ನ ಮರಯೋ ಹಾಗಿಲ್ಲ. ಏನೇ ಇದ್ರೂ ಇತ್ತೀಚಿಗೆ ಭಾಷೆಗೆ ಬೆಲೆ ಇಲ್ಲದಿರುವುದು ತುಂಬಾ ವಿಪರ್ಯಾಸದ ಸಂಗತಿ..

ಎಲ್ಲಾ ಜನರು ಕೊಟ್ಟ ಭಾಷೆಗೆ ಮತ್ತು ಆಡಿದ ಮಾತಿಗೆ ನಡೆದುಕೊಂಡರೆ ಏನೆಲ್ಲ ನಡೆಯಬಹುದು ಅಂತ ಯೋಚನೆ ಮಾಡಿ...


ಇಂತಿ,


ವೀರೇಶ್  ಶಿವಣ್ಣ

2 comments:

  1. ಎಲ್ಲಾ ಜನರು ಕೊಟ್ಟ ಭಾಷೆಗೆ ಮತ್ತು ಆಡಿದ ಮಾತಿಗೆ ನಡೆದುಕೊಂಡರೆ ಏನೆಲ್ಲ ನಡೆಯಬಹುದು ಅಂತ ಯೋಚನೆ ಮಾಡಿ..????? enaagabahudu?

    ReplyDelete