Sunday, November 28, 2010

"ಸ್ನೇಹದ ಪ್ರೀತಿ"

ಸ್ನೇಹಿತೆಯನ್ನು ಮಾಡಿದೆನು ಪ್ರೀತಿ
ಪ್ರತಿ ದಿನವು ಬೆಳೆಯಿತು ಅವಳ ನನ್ನ ಪ್ರೀತಿ
ಅವಳು ಇದ್ದಳು ಐಶ್ವರ್ಯ ರೈ ನ ರೀತಿ 
ಒಂದು ದಿನ ಹೇಳಿದೆ ನಿನ್ನ ಪ್ರೀತಿಸುವೆ 
ರೋಮಿಯೋ ಜೂಲಿಯಟ್ ನ ರೀತಿ 
ಕೆಪ್ಪಾಳಕ್ಕೆ ಕೊಟ್ಟಳು ಜಾಕಿಚಾನ್ ನ ರೀತಿ 
ಆಗ ತಿಳಿದೆ ಅವಳು ಮಾಡುತ್ತಿರುವುದು  "ಸ್ನೇಹದ ಪ್ರೀತಿ"

"ಆಸ್ತಿ ಪಾಸ್ತಿಯ ಪ್ರೀತಿ"

ಶ್ರೀ ಪತಿ ಗಿತ್ತು ಜೋರಾಗಿ ಆಸ್ತಿ ಪಾಸ್ತಿ 
ಅವನ ಪ್ರೀತಿಸಿದಳು ಒಬ್ಬಳು ಸುಮತಿ 
ಕೆಡಿಸಿದಳು ಅವನ ಮತಿ (ಬುದ್ದಿ )
ಬಿಟ್ಟು ಬಂದನು ಅವನು ಕಾರು ಬಂಗಲೆಯ ಆಸ್ತಿ 
ಅವನೆಂದನು ಅವಳಿಗೆ ಇನ್ನು ನೀನೆ ಗತಿ 
ಅವಳು ಅವನನ್ನು ಬಿಟ್ಟು ಹೋದಳು ಇನ್ನೊಬ್ಬನ ಜೊತಿ.

"ಏಡ್ಸ್ ನ ಚಲಪತಿ"

ನಮ್ಮ  ಊರಲ್ಲಿ ಇದ್ದ ಒಬ್ಬ ಚಲಪತಿ 
ಹುಡುಗಿಯರೆಂದರೆ ಅವನಿಗೆ ಬಲು ಪ್ರೀತಿ 
ಬಂತು ಅವನಿಗೆ ಕಾಯಿಲೆಯ ಭೀತಿ 
ಕಾಣಿಸಿಕೊಂಡಿತು ಅವನಿಗೆ ಏಡ್ಸ್ ನ ರೀತಿ
ಶುರುವಾಯಿತು ಅವನಿಗೆ ಭೇದಿ ವಾಂತಿ 
ಕಾಲವಾದನು ಅವನು ಆರು ವರ್ಷದ ಮೊದಲ ರಾತ್ರಿ 
ಇವತ್ತು ಅವನ ಮೊದಲನೇ ತಿಥಿ.

"ಸೂಟು ಬೂಟು ಕಾರಿದ್ರೆ" 

ನಮ್ಮ ಮಾವನ ಮಗಳು ಪ್ರೀತಿ 
ನಾನು ಪ್ರೀತಿಸಿದೆ ಅವಳನ್ನು ದಿನಂ ಪ್ರತಿ 
ನಾನಿಷ್ಟ ಪಟ್ಟೆ ಅವಳ ಪ್ರೀತಿ 
ಅವಳಿಗೆ ಸರಿಕಾಣಲಿಲ್ಲ ನನ್ನ ಬಡತನದ ರೀತಿ 
ಸರಿ ಹೊಂದಲಿಲ್ಲ ನನಗೆ ಅವಳ ಮನಸ್ಸಿನ ನೀತಿ 
ಮನೆಬಿಟ್ಟು ಹೋದಳು ರಾತ್ರಿಯೋ ರಾತ್ರಿ 
ಕಾರಿನ ಜೊತೆ ಬಂದಳು ಮಾರನೆ ರಾತ್ರಿ 
ಹಾಳು ಹೋಗಿದೆ ಅವಳ ಶೀಲದ ರೀತಿ ನೀತಿ.


"ಯೋಚಿಸ ಬಾರದೆ...?"

 ತಿರುಪತಿಗೆ  ಇದ್ದಳು ಒಬ್ಬಳೇ ಮಗಳು ಆರತಿ 
ಆರತಿ ಪ್ರೀತಿಸಿದ ಹುಡುಗ ಜಗಪತಿ 
ಮಗಳಿಗೆ ಮದುವೆ ಮಾಡಿದ ತಿರುಪತಿ 
ಮೊದಲ  ರಾತ್ರಿ ಕಳೆದ ಜಗಪತಿ
ಅವಳನ್ನು  ಬಿಟ್ಟು ಹೋದ ಮಾರನೆ ರಾತ್ರಿ 
ಆಮೇಲೆ  ಮಾಡಿದ ಸರಿಯಾದ ಮಂಗಳಾರತಿ 
ಆರತಿ ಯ ಸ್ಥಿತಿ ಈಗ ನಾಯಿಯ ರೀತಿ.


By :  ವೀರೇಶ್  ಶಿವಣ್ಣ

No comments:

Post a Comment