Monday, June 25, 2012

ಆಸೆ

ಹಕ್ಕಿಗೆ ಗೂಡನು ಕಟ್ಟುವ ಆಸೆ
ಗೂಡಲಿ ಮರಿಯನು ನೋಡುವ ಆಸೆ
ಮರಿಗೆ ಎತ್ತರ ಹಾರುವ ಆಸೆ
ಆಸೆ ಇರಬೇಕು ಜಗದೊಳಗೆ...

ದೇವರಿಗೂ ಕೂಡಾ ಇರುವುದು ಆಸೆ
ತನ್ನ ಭಕ್ತರನು ಕಾಯುವ ಆಸೆ
ಒಳ್ಳೆಬುದ್ದಿಯನು ಕರುಣಿಸುವ ಆಸೆ
ಆಸೆ ಇರಬೇಕು ಜಗದೊಳಗೆ...

ದುಂಬಿಗೆ ಹೂವನು ಕಂಡರೆ ಆಸೆ
ಹೂವಿನ ಮಕರಂದ ಹೀರುವ ಆಸೆ
ಹೂವಿಂದ ಹೂವಿಗೆ ಹಾರುವ ಆಸೆ
ಆಸೆ ಇರಬೇಕು ಜಗದೊಳಗೆ...

ಆಕಳಕರುವಿಗೆ ತಾಯಿಯ ಆಸೆ
ತಾಯಿಗೆ ತನ್ನ ಕರುಳಿನ ಆಸೆ
ಅದಕೆಹಾಲುಣಿಸಿ ಸಂತಸ ಹೊಮ್ಮುವ ಆಸೆ
ಆಸೆ ಇರಬೇಕು ಜಗದೊಳಗೆ...

ಸನ್ಯಾಸಿಗೂ ಕೂಡಾ ಇರುವುದು ಆಸೆ
ದೇವನೊಬ್ಬನನ ನೋಡುವ ಆಸೆ
ಅವನಲಿ ಲೀನವಾಗುವ ಆಸೆ
ಆಸೆ ಇರಬೇಕು ಜಗದೊಳಗೆ...

ಗಿಡಕೆ ಮರವಾಗಿ ಬೆಳೆಯುವ ಆಸೆ
ಮರವಾಗಿ ಬೆಳೆದು ಹಣ್ ಬಿಡುವ ಆಸೆ
ಅದರಿಂದೋಂದು ಗಿಡಬೆಳೆಸುವ ಆಸೆ
ಆಸೆ ಇರಬೇಕು ಜಗದೊಳಗೆ...

ಪ್ರೇಮಿಗೆ ಪ್ರಿಯಕರನ ನೋಡುವ ಆಸೆ
ಪ್ರಿಯಕರನ ನೋಡುವ ಆಸೆ
ಅವನೊಡನೆ ಮಾತಾಡುವ ಆಸೆ
ಆಸೆ ಇರಬೇಕು ಜಗದೊಳಗೆ...

ಅಮ್ಮಗೆ ಮಗುವನು ಕಾಣುವ ಆಸೆ
ಮಗುವದು ಮಾತಾಡೆ ಇನ್ನೂ ಆಸೆ
ಎಂದಿಗೆ ನಡೆವುದೊ ಎಂಬ ಆಸೆ
ಆಸೆ ಇರಬೇಕು ಜಗದೊಳಗೆ...

ಸರಳಜೀವಿಗೂ ಇರುವುದು ಆಸೆ
ದುಂದುವೆಚ್ಚವ ಮಾಡದ ಆಸೆ
ಸಾರ್ಥಕ ಜೀವನ ನಡೆಸುವ ಆಸೆ
ಆಸೆ ಇರಬೇಕು ಜಗದೊಳಗೆ...

ಆಸೆ ಇರಬೇಕು ಜಗದೊಳಗೆ...
ಇದ್ದರೆ ಚೆನ್ನ ಮಿತಿಯೊಳಗೆ...

No comments:

Post a Comment