Thursday, November 18, 2010

"ಮೋಸಗಾತಿ ನನ್ನ ಹುಡುಗಿ "

     ಯಾರಿಗೆ ಯಾರು ಮೋಸ ಮಾಡ್ತಾರೆ ಅಂತ ಹೇಳೋಕೆ ಆಗಲ್ಲ..ಈ ಪ್ರೀತಿ ಅಂದ್ರೆ ಯಾರಿಗೆ ಯಾವಾಗ ಮೋಸ ಮಾಡುತ್ತೆ ಅಂತ ಹೇಳೋಕೂ  ಆಗಲ್ಲ, ಪ್ರತಿ ಹುಡುಗರ ಮಾನಸಲ್ಲಿ ಅವನದೇ ಆದ ಆಸೆಗಳು ಇರುತ್ತೆ ನಾನು ಪ್ರೀತಿ ಮಾಡಬೇಕು ನನಗು ಒಬ್ಬಳು ಗೆಳತಿ ಬೇಕು ಅಂತ ಆದರೆ ಪ್ರೇಮಿಸಿದ ಬಳಿಕ ಗೊತ್ತಾಗುತ್ತೆ ಪ್ರೀತಿಯಲ್ಲಿ ಏನು ಸಿಗುತ್ತೆ ಪ್ರತಿಫಲ ಅಂತ..ಪ್ರೀತಿ ಅಂದ್ರೆ ಹಾಗೆ ಹೀಗೆ ಅಂತ ತುಂಬಾ ಆಸೆಗಳನ್ನ ಇಟ್ಟುಕೊಂಡು ಪಾಪ ಪ್ರೀತಿ ನ ಮಾಡ್ತಾನೆ ಆದರೆ ಕೊನೆಗೆ ಸಿಗುವುದು ಶೂನ್ಯ...
ಯಾಕೆ ಈ ಹುಡುಗಿಯರು ಮುಗ್ದ ಹುಡುಗರ ಮನವನ್ನ ಕಲಕುತ್ತಾರೆ, ಯಾಕೆ ಪ್ರೀತಿ ಅಂತ ಬಾವಿಗೆ ಬೀಳಿಸಿ ಅವರ ಭವಿಷ್ಯವನ್ನ ಹಾಳುಮಡ್ತಾರೆ ಪಾಪ ಏನೋ ಏನೋ ಆಸೆ ಇಟ್ಕೊಂಡು ಪ್ರತಿ ಹುಡುಗರು ತನ್ನ ಮನದಲ್ಲಿ ಅವರ ಅವರ ಹುಡುಗಿಯನ್ನು ದೇವತೆ ಯನ್ನಾಗಿ ಆರಾಧಿಸುತ್ತಾರೆ ಆದರೆ ಹುಡುಗಿಯರು ಅವರ ವರ್ತನೆಗಳಿಂದ ಹುಡುಗರ ಪಾಲಿಗೆ ಯಮನ ರೂಪ ದಲ್ಲಿ ಅವತಾರವನ್ನ ತಾಳಿ ಬರ್ತಾರೆ..
 ಪ್ರೀತಿ ಮಾಡಬೇಕು ಮಾಡಬಾರದು ಅಂತ ಆಜ್ಞೆ ಏನು ಇಲ್ಲ ಆದರೆ ಪ್ರೀತಿಸಿದವನ  ಕೈ ಯನ್ನು ಎಂದು ಬಿಡಬಾರದು, ಎಲ್ಲಾ ಹುಡುಗಿಯರ ಬಗ್ಗೆ ಹೇಳ್ತಾ ಇಲ್ಲ ನಂಬಿಸಿ ಮೋಸ ಮಾಡುವವರ ಬಗ್ಗೆ ಮಾತ್ರ...ಪ್ರತಿಯೊಬ್ಬ ಹುಡುಗಿಯರು ಈ ರೀತಿ ಮಾಡ್ತಾರೆ ಅಂತ ಹೇಳ್ತಾ ಇಲ್ಲ ಮನಸಲ್ಲಿ ಬೇರೆ ಹೊರಗಡೆ ಬೇರೆ ಬುದ್ದಿಯನ್ನ ಇಟ್ಟು ಮೋಸ ಮಾಡುವವರ ಬಗ್ಗೆ ತುಂಬಾ ಹೇಳಬೇಕಾಗುತ್ತೆ..
ಹುಡುಗ ತನ್ನ ಪ್ರೀತಿಯ ಬಲೆಯಲ್ಲಿ ಬಿದ್ದ ಬಳಿಕ ಅವನು ತನ್ನ ಸ್ನೇಹಿತರನ್ನು ಸಹ ದೂರ ಮಾಡಿ ಕೊಳ್ಳುತ್ತಾನೆ, ಅವನಿಗೆ ಯಾವುದೇ ಅವಕಾಶ ಸಿಕ್ಕರೂ ಅದನ್ನ ಉಪಯೋಗಿಸಿ ಕೊಳ್ಳುವುದೇ ಇಲ್ಲ್ಲ,ನನಗೆಲ್ಲ ಅವಳೇ ಬಂಧು ಬಳಗ ಅಂತ ಸ್ನೇಹಿತರಿಂದ ದೂರ ಸರಿಯುತ್ತಾನೆ,ಅವಳನ್ನ ಗಾಡವಾಗಿ ಪ್ರೀತಿಸುತ್ತಾನೆ, ಪಾಪ ಅವನಿಗೆ ಆಗುವ ಮುಂದಿನ ಪರಿಣಾಮದ ಬಗ್ಗೆ ಅವನಿಗೆ ಅರಿವೇ ಇರುವುದಿಲ್ಲ,ಹುಡುಗಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಆತನನ್ನ ಉಪಯೋಗಿಸಿ ಕೊಳ್ಳುತ್ತಾಳೆ.ಮೊದಲು ಕಾಇನ್ ಬಾಕ್ಸ್ ಇಂದ ಫೋನ್ ಮಾಡ್ತಾ ಇದ್ದ ಹುಡುಗಿ ಅದನ್ನ ಬಿಟ್ಟು ನಾನು ನಿನ್ನ ಜೊತೆ ಸರಿಯಾಗಿ ಮಾತಾಡೋಕೆ ಆಗ್ತಾ ಇಲ್ಲ ಏನಾದ್ರು ಮಾಡಿ ನನಗೆ ಮೊಬೈಲ್ ಕೊಡ್ಸು ಅಂತ ಕೇಳಿ  ಕೊಳ್ಳುತ್ತಾಳೆ, ಮೊಬೈಲ್ ಬಂದ ಬಳಿಕ ಶುರುವಾಗುವುದೇ ಬೇರೆ ಆಟ...ದಿನ ಮೊಬೈಲ್ ಗೆ ಕರೆನ್ಸಿ ಹಾಕ್ಸು ಅಂತಾರೆ ನಾವು ಹಾಕಿಸಿದ ದುಡ್ಡಿಂದ ಬೇರೆ ಹುಡುಗರನ್ನ maintain ಮಾಡ್ತಾರೆ, 
ಇಲ್ಲಿಂದ ಪ್ರತಿ ನಿತ್ಯ ಮೊಬೈಲ್ ಗೆ ಬಿಡುವೆ ಇರುವುದಿಲ್ಲ ರಾತ್ರಿ ಎಲ್ಲಾ ಚಿನ್ನು ಬಂಗಾರ ಅಂತ ಮಾತನಾಡುತ್ತ ಸಮಯ ಕಳೆಯುವುದೇ ಅವರಿಗೆ ಗೊತ್ತಾಗುವುದೇ ಇಲ್ಲ, ಆಗ ಅವರು ಸಮಯ ನೋಡಿದರೆ ಸರಿ ಸುಮಾರು ೫ ಗಂಟೆ ಜಾವ ಆಗಿರುತ್ತೆ. ಈ ಹುಡುಗಿಯು ಮಾತನಾಡುವಾಗ ಅವರ  ಮುಂದೆ ಆಗುವ ಮಗುವಿಗೂ ನಾಮಕರಣವನ್ನ ಆ ರಾತ್ರಿನೇ ಇಟ್ಟಿರುತ್ತಾರೆ, ಅವರದೇ ಆದ ಲೋಕದಲ್ಲಿ ತೇಲಾಡುತ್ತ ತುಂಬಾ ಸಂತೋಷ ದಿಂದ ಕಾಲವನ್ನು ಕಳೆಯುತ್ತಾರೆ,ಅವರು  ತಮ್ಮ ಮುಂದಿನ ಭವಿಷ್ಯದ ಕಡೆಗೆ ಸ್ವಲ್ಪ ಕೂಡ ಗಮನವನ್ನ ಹರಿಸುವುದಿಲ್ಲ. ಆದರೆ ಇಲ್ಲಿ ಬಲಿ ಪಶುವಾಗುವರು ತುಂಬಾ ಹುಡುಗರು ಹೆಚ್ಚು..  
ಮೊಬೈಲ್ ಬಂದ ಬಳಿಕ ಹುಡುಗಿಯರು ಬದಲಾಗುವುದು ಅವರ ಜಾಯಮಾನ ಅದು ಅವರ ಹುಟ್ಟುಗುಣ, ರಾತ್ರಿಯಲ್ಲ ಒಬ್ಬನ ಜೊತೆ ಮಾತಾಡಿಕೊಂಡು ಮತ್ತೆ ಮಾರನೆ ದಿನ ರಾತ್ರಿ ಇನ್ನೊಬ್ಬನ ಜೊತೆ ಮಾತಾಡುವುದು ಅವರು ನಡಿಸಿಕೊಂಡು ಬಂದಿರುವ ಪದ್ಧತಿ. ಅವರು ಎಷ್ಟು ಸಿಮ್ ಕಾರ್ಡ್ ಇಟ್ಟಿರ್ತಾರೆ ಅಂತ ಅವರಿಗೆ  ಗೊತ್ತು ಪಾಪ ಪ್ರೀತಿಗೆ ಬಿದ್ದ ಈ ಮುಗ್ದ ಹುಡುಗನಿಗೆ ಈ ವಿಷಯ ಅರ್ಥವಾಗುವುದಿಲ್ಲ. ಈತ ಯಾಕೆ ನೆನ್ನೆ ನನ್ನ ಹತ್ರ ಮಾತನಾಡಲಿಲ್ಲ ಅಂತ ಕೇಳಿದ್ರೆ ಈಕೆ ನಯವಾಗಿ ಜಾರುತ್ತಾಳೆ. ನಮ್ಮ ಅಮ್ಮ ನನ್ನ ಜೊತೆ ಮಲಗಿದರು ಅಂತ ಯಾವುದೊ ನೆಪ ಹೇಳಿ ಹುಡುಗನಿಗೆ ಸಂದೇಹ ಬರದಂತೆ ನಡೆದು ಕೊಳ್ಳುತ್ತಾಳೆ.
ಆ ಹುಡುಗ ಪ್ರತಿ ದಿನ ಅವಳನ್ನ ಹೆಚ್ಚಾಗಿ ಪ್ರೀತಿಸ  ತೊಡಗುತ್ತಾನೆ  ಆದರೆ ಅವಳು ಅವನ ಮನಸನ್ನ ಅರ್ಥನೇ ಮಾಡಿಕೊಳ್ಳುವುದೇ ಇಲ್ಲ.. ಸುಮ್ಮನೆ ಆಕರ್ಷಣೆಗೆ ಬಿದ್ದ ಈ ಹುಡುಗಿ ಮತ್ತೆ ಯಾರನ್ನೋ ನೋಡಿ ಅವರಿಗೆ ಫೋನ್ ಮಾಡ್ತಾ ಇರ್ತಾಳೆ.. ಆಗ ಮೊದಲು  ಪ್ರೀತಿಸಿದವನಿಂದ ದೂರ ಸರಿಯಲು ಕಾರಣಗಳನ್ನ ಹುಡುಕುತ್ತ  ಹೋಗ್ತಾಳೆ , ಅವರಿಗೆ ದೂರವಾಗಲು ಯಾವುದೊ ಸ್ವಲ್ಪ ನೆಪ ಸಾಕು. ಚಿಕ್ಕ ವಿಶಯವನ್ನು  ದೊಡ್ಡದಾಗಿ ಮಾಡಿಕೊಂಡು ಆ ಹುಡುಗನಿಂದ ದೂರ ದೂರ ಹೋಗುತ್ತಾಳೆ .. ಈ ರೀತಿ ಮಾಡಿದರೆ ಹುಡುಗನಿಗೆ ಏನು ಆಗಬೇಕು ಪ್ರೀತಿಗೆ ಬಿದ್ದ ಹುಡುಗನಿಗೆ ಸಿಕ್ಕಿದ ಪ್ರತಿ ಫಲ ಇದೇನಾ...?  ಈ  ಹುಡುಗ ಮುಂದೆ  ಏನು ಮಾಡಬೇಕು ಹೇಳಿ..?
ಈ ರೀತಿ ಪ್ರೀತಿ ಯಾಕೆ ಮಾಡಬೇಕು ಅಲ್ವಾ..ಹುಡುಗನಿಗೆ ಆಗುವ ನೋವು ಅವರಿಗೆ ಹೇಗೆ ಅರ್ಥ ಆಗಬೇಕು.. ಪ್ರೀತಿ ಮಾಡೋದು ಸುಲಭ ಆದರೆ ಅವಳು ಬಿಟ್ಟಾಗ ಬರುವ ವೇತನೆ ಯಾರಿಗೆ ಅರ್ಥ ಆಗುತ್ತೆ. ಅಷ್ಟರಲ್ಲಿ  ಏನೋ ಏನೋ ಕನಸನ್ನ ಕಾಣುತ್ತಿದ್ದ ಹುಡುಗ ಮಂಕಾಗಿ ಹೋಗುತ್ತಾನೆ. ಜೀವನ ಇಷ್ಟೇನಾ ಅಂತ ಸುಮ್ಮನೆ ಚಿಗುರಿದ ಆಸೆಗಳನ್ನು  ಚಿವುಟುತ್ತ ಅವನದೇ ಆದ ಲೋಕದಲ್ಲಿ ಬದುಕುತ್ತಾನೆ.  ಬುದ್ದಿ ಕಲಿತ ಹುಡುಗರು ಈ ಮೊಸಗಾರ್ತಿಯರಿಂದ ದೂರ ಇರುವುದು ಒಳಿತು.... 

ಇಂತಿ ನಿಮ್ಮ ಪ್ರೀತಿಯ...

ವೀರೇಶ್ ಶಿವಣ್ಣ


 

3 comments:

  1. i think yes....yarappa aa mane haali...

    ReplyDelete
  2. ella hudgiru haage iralla houdu priti yaake maadbeku asht doubt iroru love ne maadbardu frnd agi irbeku love maadi da hudgi mele doubt padonu tumba keelu manushya agtane

    ReplyDelete